ಇವನಾರವ . . . ! ಇವನಾರವ . . .! ಇವನಾರವ ಎನಿಸದಿರಯ್ಯ
ಇವ ನಮ್ಮವ . . . !, ಇವ ನಮ್ಮವ . . . !, ಇವ ನಮ್ಮವ ಎಂದೆನಿಸಯ್ಯ
ಶರಣ ಸಂಸ್ಕೃತಿ ನಮ್ಮ ನೆಲದ ಬಹುದೊಡ್ಡ ಆದರ್ಶ. ಶಿವ ತತ್ವದ ಧಾರ್ಮಿಕ ಸಿದ್ದಾಂತ, ಕಾಯಕತತ್ವದ ಅರ್ಥ ಸಿದ್ದಾಂತ, ವಚನಗಳ ಸಾಹಿತ್ಯಕ ಚಿಂತನೆ, ಶರಣತ್ವದ ಸಾಮಾಜಿಕ ಬದುಕು...
ಹೀಗೆ ಒಂದು ಚಳವಳಿ ಮನುಷ್ಯನನ್ನು ಕೇಂದ್ರವಾಗಿಟ್ಟುಕೊಂಡು ಒಂದು ಹೊಸ ಸಮಾಜವನ್ನು ರೂಪಿಸಲು ಪ್ರಯತ್ನ ನಡೆಸಿತು. ಜಗತ್ತಿನಲ್ಲೆ ಇಂತಹದೊಂದು ಸಮಗ್ರ ಚಳವಳಿ ನಡೆದ ಉದಾಹರಣೆ ಇಲ್ಲ. ಇಂತಹ ಸಾಮಾಜಿಕ ಕ್ರಾಂತಿಗೆ ತನ್ನನ್ನು ತೊಡಗಿಸಿಕೊಂಡ ವೀರಶೈವ ಸಮುದಾಯ ತಮ್ಮ ಬಗ್ಗೆ ಅಭಿಮಾನ ಪಡೆಬೇಕಾಗಿರುವುದು ಸಹಜವೇ ಸರಿ.
ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲೂ ಹರಡಿರುವ ಹಾಗೂ ದೇಶ- ವಿದೇಶದಲ್ಲಿ ನೆಲೆನಿಂತಿರುವ ವೀರಶೈವ ಸಮುದಾಯಕ್ಕೆ ತಮ್ಮೊಳಗಿನ ಕಾರ್ಯಚಟುವಟಿಕೆಗಳ ಬಗ್ಗೆ ಗೊತ್ತು ಮಾಡುವುದು ನಮ್ಮ ಉದ್ದೇಶ.
ನಾಡಿನ ಉದ್ದಗಲಕ್ಕೂ ತ್ರಿವಿಧ ದಾಸೋಹ ನೀಡುತ್ತಿರುವ ಮಠಗಳು, ಶರಣ ಸಂಸ್ಕೃತಿಯನ್ನು ಪಸರಿಸುತ್ತಿರುವ ಸಮುದಾಯ ಸಂಘಟನೆಗಳು ಹಾಗೂ ಸಮುದಾಯಕ್ಕೆ ಕಳಸ ಪ್ರಾಯವಾಗಿರುವ ಸಾಧಕರ ವಿವರಗಳು ಇಲ್ಲಿವೆ.
ಹಾಗೆಯೇ ಶರಣರ ಬಗೆಗಿನ ಎಲ್ಲ ಸುದ್ದಿಗಳನ್ನು ಕಾಲ ಕಾಲಕ್ಕೆ ನಾವು ನಿಮಗೆ ನೀಡುತ್ತೇವೆ.
ಈ ತಾಂತ್ರಿಕ ಸಾಧನದಿಂದ ನಾವು ಇಡೀ ಸಮುದಾಯದ ಸಮಗ್ರ ದಾಖಲೆಗಳನ್ನು ಸಂಗ್ರಹಿಸಬಹುದಾಗಿದೆ. ಅಲ್ಲದೆ ಕೊಡುಕೊಳ್ಳುವ ಸಂಸ್ಕೃತಿಯನ್ನು ಹುಟ್ಟು ಹಾಕಬೇಕಾಗಿದೆ. ಅದಕ್ಕಾಗಿ ನಿಮ್ಮ ಸಹಕಾರವೂ ಬೇಕಾಗಿದೆ.
ಇದು ಬಹುಮುಖಿ ಪ್ರಯತ್ನ. ಇಲ್ಲಿರುವ ಎಲ್ಲ ಭಾಗಗಳಿಗೂ ನೀವೂ ಮಾಹಿತಿ ಒದಗಿಸಬಹುದು. ನಿಮ್ಮ ಮಾಹಿತಿಯನ್ನು ಇತರ ಶರಣ ಬಂಧುಗಳಿಗೆ ತಿಳಿಸುತ್ತೇವೆ. ಇತರರ ಮಾಹಿತಿಯನ್ನು ನಿಮಗೆ ನೀಡುತ್ತೇವೆ. ಪರಸ್ಪರ ಸಹಕಾರದಿಂದ ಶರಣ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸೋಣ ಬನ್ನಿ.
ಇವನಾರವ. . . ! ಇವನಾರವ. . .! ಇವನಾರವ ಎನಿಸದಿರಯ್ಯ
ಇವ ನಮ್ಮವ. . . !، ಇವ ನಮ್ಮವ. . . !، ಇವ ನಮ್ಮವ ಎಂದೆನಿಸಯ್ಯ
ಶರಣ ಸಂಸ್ಕೃತಿ ನಮ್ಮ ನೆಲದ ಬಹುದೊಡ್ಡ ಆದರ್ಶ. ಶಿವ ತತ್ವದ ಧಾರ್ಮಿಕ ಸಿದ್ದಾಂತ، ಕಾಯಕತತ್ವದ ಅರ್ಥ ಸಿದ್ದಾಂತ، ವಚನಗಳ ಸಾಹಿತ್ಯಕ ಚಿಂತನೆ، ಶರಣತ್ವದ ಸಾಮಾಜಿಕ ಬದುಕು ...
ಹೀಗೆ ಒಂದು ಚಳವಳಿ ಮನುಷ್ಯನನ್ನು ಕೇಂದ್ರವಾಗಿಟ್ಟುಕೊಂಡು ಒಂದು ಹೊಸ ಸಮಾಜವನ್ನು ರೂಪಿಸಲು ಪ್ರಯತ್ನ ನಡೆಸಿತು. ಜಗತ್ತಿನಲ್ಲೆ ಇಂತಹದೊಂದು ಸಮಗ್ರ ಚಳವಳಿ ನಡೆದ ಉದಾಹರಣೆ ಇಲ್ಲ. ಇಂತಹ ಸಾಮಾಜಿಕ ಕ್ರಾಂತಿಗೆ ತನ್ನನ್ನು ತೊಡಗಿಸಿಕೊಂಡ ವೀರಶೈವ ಸಮುದಾಯ ತಮ್ಮ ಬಗ್ಗೆ ಅಭಿಮಾನ ಪಡೆಬೇಕಾಗಿರುವುದು ಸಹಜವೇ ಸರಿ.
ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲೂ ಹರಡಿರುವ ಹಾಗೂ ದೇಶ- ವಿದೇಶದಲ್ಲಿ ನೆಲೆನಿಂತಿರುವ ವೀರಶೈವ ಸಮುದಾಯಕ್ಕೆ ತಮ್ಮೊಳಗಿನ ಕಾರ್ಯಚಟುವಟಿಕೆಗಳ ಬಗ್ಗೆ ಗೊತ್ತು ಮಾಡುವುದು ನಮ್ಮ ಉದ್ದೇಶ.
ನಾಡಿನ ಉದ್ದಗಲಕ್ಕೂ ತ್ರಿವಿಧ ದಾಸೋಹ ನೀಡುತ್ತಿರುವ ಮಠಗಳು، ಶರಣ ಸಂಸ್ಕೃತಿಯನ್ನು ಪಸರಿಸುತ್ತಿರುವ ಸಮುದಾಯ ಸಂಘಟನೆಗಳು ಹಾಗೂ ಸಮುದಾಯಕ್ಕೆ ಕಳಸ ಪ್ರಾಯವಾಗಿರುವ ಸಾಧಕರ ವಿವರಗಳು ಇಲ್ಲಿವೆ.